ಕಾಲೇಜ್ ಕುಮಾರ್ ಸಿನಿಮಾ ಟೀಮ್ ಜೊತೆ ನಟಿ ಸಂಯುಕ್ತ ಹೆಗ್ಡೆ ಫೈಟ್ | Filmibeat Kannada

2017-11-28 1,363

ಅನ್ನ ಹಾಕಿದ ನಿರ್ಮಾಪಕರಿಗೆ ದ್ರೋಹ ಬಗೆದ ಸಂಯುಕ್ತ ವಿರುದ್ಧ ದೂರು ದಾಖಲು! ಸದಾ ಒಂದಲ್ಲ ಒಂದು ಕಿರಿಕ್ ಮಾಡಿಕೊಳ್ಳುತ್ತಿರುವ ನಟಿ ಸಂಯುಕ್ತ ಹೆಗ್ಡೆ ಈಗ ಮತ್ತೊಂದು ಕಿರಿಕ್ ಮಾಡಿಕೊಂಡಿದ್ದಾರೆ. ಜೊತೆಗೆ ಇದೀಗ 'ಕಾಲೇಜ್ ಕುಮಾರ್' ಚಿತ್ರದ ನಿರ್ಮಾಪಕ ಪದ್ಮನಾಭ್ ಅವರು ಸಂಯುಕ್ತ ವಿರುದ್ಧ ಫಿಲ್ಮ್ ಚೇಂಬರ್ ನಲ್ಲಿ ದೂರು ದಾಖಲಿಸಿದ್ದಾರೆ. ಈ ಹಿಂದೆ ''ಚಿತ್ರದ ಚಿತ್ರೀಕರಣಕ್ಕೆ ಭಾಗಿಯಾಗುತ್ತಿಲ್ಲ'' ಎನ್ನುವ ಕಾರಣಕ್ಕೆ ನಿರ್ಮಾಪಕ ಪದ್ಮನಾಭ್ ಮತ್ತು ಸಂಯುಕ್ತ ನಡುವೆ ಜಗಳ ಆಗಿತ್ತು. ಈಗ ಅದೇ ರೀತಿ ಇವರಿಬ್ಬರ ನಡುವೆ ವಿವಾದ ಹುಟ್ಟಿಕೊಂಡಿದೆ. 'ಕಾಲೇಜ್ ಕುಮಾರ್‌' ಚಿತ್ರದ ಪ್ರಚಾರ ಕಾರ್ಯಕ್ರಮಗಳಿಗೆ ಸಂಯುಕ್ತ ಬರುತ್ತಿಲ್ಲವೆಂದು ನಿರ್ಮಾಪಕ ಪದ್ಮನಾಭ್ ಫಿಲ್ಮ್ ಚೇಂಬರ್ ನಲ್ಲಿ ದೂರು ನೀಡಿದ್ದಾರೆ. ಅಂದಹಾಗೆ, ಸದ್ಯ 'ಕಾಲೇಜ್ ಕುಮಾರ್' ಸಿನಿಮಾದ ಹೊಸ ವಿವಾದದ ಬಗ್ಗೆ ನಿರ್ಮಾಪಕ ಪದ್ಮನಾಬ್ ಮಾಡಿರುವ ಆರೋಪ ಏನು.?

Videos similaires